Santha Sri KANAKADASARU
Education | 12.5MB
ಕನಕದಾಸರ ಜನ್ಮ ಸ್ಥಳ ಬಾಡ ಗ್ರಾಮವು ತಾಲೂಕು ಸ್ಥಳ ಶಿಗ್ಗಾವಿಯಿ೦ದ ೮ ಕೀ.ಮೀ ಹಾಗೂ ಜಿಲ್ಲಾ ಕೇಂದ್ರ ಹಾವೇರಿಯಿ೦ದ ೨೫ ಕಿ.ಮೀ ದೂರದಲ್ಲಿದೆ. ಇ೦ದು ಈ ಗ್ರಾಮಕ್ಕೆ ಕನಕನ ಬಾಡ ಎ೦ದು ಕರೆಯಲಾಗುತ್ತಿದೆ. ಇಲ್ಲಿ ಕನಕದಾಸರ ಆರಾಧ್ಯದೈವ ಆದಿಕೇಶವ ದೇವಸ್ಥಾನ ಇದ್ದ ಬಗ್ಗೆ ಅನೇಕ ಕುರುಹುಗಳು ಲಭ್ಯವಾಗಿದೆ. ಕನಕದಾಸರು ಹಾಗು ಅವರ ಪೂರ್ವಿಕರು ವಾಸಿಸುತ್ತಿದ್ದ ಅರಮನೆಯ ಕುರುಹುಗಳು ಕೂಡ ಲಭ್ಯವಾಗಿದೆ. ಈ ಅರಮನೆಯ ಅವಶೇಷಗಳನ್ನು ರಕ್ಷಿಸಿ ಅದರ ಪ್ರತಿರೂಪವಾಗಿ ಬಾಡ ಗ್ರಾಮದ ಗುಡ್ಡದ ಮೇಲೆ ವಿಜಯನಗರ ಶಿಲ್ಪಕಲಾ ಶೈಲಿಯಲ್ಲಿ ಸುಂದರ ಅರಮನೆಯನ್ನು ನಿರ್ಮಾಣ ಮಾಡಲಾಗಿದೆ. ಅರಮನೆಯ ಒಳಭಾಗದಲ್ಲಿ ಕನಕದಾಸರ ಜೀವನ ಶೈಲಿಯನ್ನು ಚಿತ್ರಿಸಲಾಗಿದ್ದು, ಅವರ ಸಾಹಿತ್ಯದ ವಿಶೇಷ ಸನ್ನಿವೇಶಗಳನ್ನು ತೈಲವರ್ಣ ಹಾಗೂ ಉಬ್ಬು ಚಿತ್ರಗಳಲ್ಲಿ ರೂಪಿಸಲಾಗಿದೆ.ಕನಕದಾಸರ ಅರಮನೆಯು ಇದೆ ಸ್ಥಳದಲ್ಲಿತ್ತೆ೦ಬ ಆಧಾರದ ಮೇಲೆ ೧೯೬೫ ರಲ್ಲಿ ಕನಕದಾಸರ ಮೂಲ ಮಂದಿರವನ್ನು ಶ್ರೀಮತಿ ಗುರುಶಾಂತಮ್ಮ ಬಾಬುರಾವ್ ಹಂಡೆ ಮನೆತನದವರು ನಿರ್ಮಿಸಿದ್ದು ಇ೦ದಿಗು ಸಹ ಸಾವಿರಾರು ಭಕ್ತರು ಭೇಟಿ ನೀಡುತ್ತಾರೆ. ಪ್ರವಾಸಿಗರನ್ನು ಕ್ಷಣಹೊತ್ತು ಇತಿಹಾಸದ ಕಾಲಘಟ್ಟಕ್ಕೆ ಕರೆದೊಯ್ಯುವ ಈ ಮನಮೋಹಕ ಅರಮನೆಯನ್ನು ನಿರ್ಮಿಸಿದ್ದು ಒಂದು ಇತಿಹಾಸವೇ ಸರಿ.